ರಾಯಚೂರು ಏಪ್ರಿಲ್ 02 (ಕರ್ನಾಟಕ ವಾರ್ತೆ): ಪೊಲೀಸ್ ಇಲಾಖೆಯು ಗುರುವಾರ ರಾಯಚೂರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಆರಕ್ಷಕ ಉಪ ನಿರೀಕ್ಷಕರಾದ ಬಸವರಾಜ ಅವರು ಮಾತನಾಡಿ, ಪೊಲೀಸರು ಎಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಅಲ್ಲಿ ಧ್ವಜ ಇರುತ್ತದೆ. ಪೊಲೀಸ್ ಧ್ವಜದ ಗೌರವ ಎತ್ತಿ ಹಿಡಿಯುವುದು ಪೊಲೀಸರ ಕರ್ತವ್ಯ ಎಂದರು.
ಇAದು ಪೋಲೀಸ್ ಇಲಾಖೆಗೆ ಮಹತ್ವದ ದಿನವಾಗಿದ್ದು, 1965ರ ಎಪ್ರಿಲ್ 2ರಂದು ಕರ್ನಾಟಕದಲ್ಲಿ ಪೋಲೀಸ್ ಪಡೆ ಅಧಿಕೃತವಾಗಿ ರಚೆನಯಾದ ನೆನಪಿಗಾಗಿ ಈ ದಿನವನ್ನು ಕರ್ನಾಟಕ ರಾಜ್ಯ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಆಚರಣೆಯನ್ನು ಮಾಡುತ್ತಾ ಬಂದಿವೆ. ಈ ಧ್ವಜವು ಶಿಸ್ತು, ಕರ್ತವ್ಯ ನಿಷ್ಠೆ, ಕಾನೂನು ಪಾಲನೆ ಮತ್ತು ರಕ್ಷಣೆಯ ಸಂಕೇತವಾಗಿದೆ. ಸಮಾಜದಲ್ಲಿ ಸಾರ್ವಜನಿಕರು ಮತ್ತು ಪೋಲೀಸರ ನಡುವಿನ ಬಾಂಧವ್ಯವನ್ನು ಬೆಳೆಸಲು ಅತಿ ಮುಖ್ಯವಾಗಿದೆ. ಇದನ್ನು ಪ್ರತಿ ವರ್ಷ ಪೋಲೀಸ್ ಧ್ವಜ ಟಿಕೇಟ್‌ಗಳನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗುತ್ತದೆ ಎಂದರು.
ನಾನು 1987ರ ಫೆಬ್ರುವರಿಯಲ್ಲಿ ಪೋಲೀಸ್ ಇಲಾಖೆಯಲ್ಲಿ ಪಿ.ಸಿ, ಎಚ್.ಸಿ, ಮತ್ತು ಎ.ಎಸ್.ಐ ಮತ್ತು ಪಿ.ಎಸ್.ಐ ಹುದ್ದೆಯಲ್ಲಿ ಹಲವು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ದಿನಾಂಕ 28-02-2025 ರಂದು ಸಿಂಧನೂರು ನಗರ ಪೋಲೀಸ್ ಠಾಣೆಯಿಂದ ನಿವೃತ್ತಿ ಹೊಂದಿರುತ್ತೇನೆ ಎಂದರು.
ಪೋಲೀಸ ಕೆಲಸವೆಂದರೆ ಅಷ್ಟು ಸುಲಭದ ಕೆಲಸವಲ್ಲ. ಇದು ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂದಹಾಗೆ ದೂರದಿಂದ ನೋಡುವವರಿಗೆ ಚಂದ ಕಂಡರೂ, ಒಳಗಡೆ ಕಲ್ಲು, ಮುಳ್ಳು, ಕಷ್ಟ ಇದ್ದ ಹಾಗೇ ಕೆಲವು ತೊಂದರೆಗಳು ಇರುತ್ತವೆ. ಮತ್ತು ಬಿಸಿಲು, ಗಾಳಿ ಮಳೆ ಧೂಳು ಎನ್ನದೇ ಎಲ್ಲಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಸರಕಾರಿ ಹಾಗೂ ಸಾರ್ವತ್ರಿಕ ರಜೆ ಇದ್ದಾಗ ಉಳಿದವರಿಗೆ ಹಬ್ಬ, ಹರಿದಿನ ಜಾತ್ರೆ ಸಂಭ್ರಮಗಳನ್ನು ಆಚರಿಸುತ್ತಿದ್ದರೆ ಪೋಲೀಸರು ಮಾತ್ರ ಸಾರ್ವಜನಿಕರ ರಕ್ಷಣೆ ಸಲುವಾಗಿ ತಮ್ಮ ಕುಟುಂಬದ ಮನೆ ಬಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಹಾಗೂ ಕೆಲವು ಸಮಯದಲ್ಲಿ ನೀರು, ಊಟ, ನಿದ್ದೆ ಎನ್ನುವುದು ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಆದರೂ ಸಹ ಪೋಲೀಸರು ಎದೆಗುಂದದೇ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯನ್ನು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ದಿನವನ್ನು ಪ್ರತಿ ವರ್ಷ ಏಪ್ರಿಲ್ 2 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ದಿನದ 24 ಗಂಟೆಗಳ ಕಾಲ ವಿಶ್ರಾಂತಿವಿಲ್ಲದೇ ಕರ್ತವ್ಯ ನಿರ್ವಹಿಸಿ, ಸಾರ್ವಜನಿಕರ ಆಸ್ತಿ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ತೊಡಗಿರುವ ಅಂಶ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ ಎಂದರು.
2025-26ನೇ ಸಾಲಿನ ಸಾಲಿನಲ್ಲಿ ಆರೋಗ್ಯ ಭಾಗ್ಯ ಯೋಜನೆಡಿಯಲ್ಲಿ ಒಟ್ಟು 227 ಜನ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರಿಗೆ ವೈದ್ಯಕಿಯ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. 2025-26ನೇ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಯಿಂದ 82 ಜನ ನಿವೃತ್ತ ಸಿಬ್ಬಂದಿಯವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಒಟ್ಟು 9,13,812ರೂ.ಗಳನ್ನು ಪಾವತಿಸಲಾಗಿದೆ ಎಂದರು.
2025-26 ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಯಿಂದ 15 ಜನ ನಿವೃತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಶವ ಸಂಸ್ಕಾರಕ್ಕಾಗಿ ಒಟ್ಟು 1,50,000 ರೂ.ಗಳನ್ನು ಪಾವತಿಸಲಾಗಿದೆ ಎಂದರು.
ಸಿಬ್ಬಂದಿಯವರ ಉಪಯೋಗಕ್ಕಾಗಿ ಪೊಲೀಸ್ ಕಲ್ಯಾಣ ಮಂಟಪ, ಗ್ರಂಥಾಲಯ ಹಾಗೂ ಜಿಮ್‌ಗಳು, ಸಬ್ಸಿಡರಿ ಪೊಲೀಸ್ ಕ್ಯಾಂಟಿನ್ ಕೆಲಸ ಮಾಡುತ್ತಿವೆ. ಅಲ್ಲದೆ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಅವರುಗಳ ಪತ್ನಿ, ಮಕ್ಕಳಿಗೆ ಹಾಗೂ ತಂದೆ ತಾಯಿಯವರು ಸೇರಿ ಸುಮಾರು 955 ಜನರನ್ನು ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಚಿಕಿತ್ಸೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಒಂದು ನಿಧಿಯನ್ನು ಮಾಡಿದ್ದು, ಈ ನಿಧಿಗಾಗಿ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಪೊಲೀಸ್ ಸಿಬ್ಬಂದಿಯವರಿಗೆ ಮತ್ತು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲಾಗುವುದು. ಈ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಹಾಗೂ ಕರ್ತವ್ಯದಲ್ಲದ್ದ ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಉಪಯೋಗಿಸಲಾಗುತ್ತಿದ್ದು, ಎಲ್ಲರೂ ಈ ನಿಧಿಗೆ ಸಹಾಯ ಧನವನ್ನು ನೀಡಿ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಕರಿಸಬೇಕೆಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಸ್ವಾಮಿ, ಜಿ.ಹರೀಶ್, ಡಿವೈಎಸ್ಪಿ ಪ್ರಮಾನಂದ ಘೋರಕೆ, ದತ್ತಾತ್ರೇಯ ಕಾರ್ನಾಡ್, ಸಿಪಿಐಗಳಾದ ಸಾಬಯ್ಯ, ಸೋಮಶೇಖರ, ಹನುಮಂತ ನಾಯಕ, ಮಹಾದೇವ ಪಂಚಮುಖಿ, ಬಸವರಾಜ ತೇರಿ, ಈರೇಶ ನಾಯಕ, ಬಸಪ್ಪ ಬಿಳಿಗೇರಿ, ಅಮರೇಶ ಜಗರಕಲ್, ರಂಗನಾಥ ಕೋಟೆ, ಪಿಎಎಸ್‌ಐಗಳಾದ ತಿಮ್ಮಣ್ಣ ನಾಯಕ, ಹುಲಿಗೇಶ್, ಸಣ್ಣ ವಿರೇಶ್, ಸಿದ್ದಪ್ಪ, ಮಹಮ್ಮದ್ ಇಸಾಕ್, ಉದಯ ಕುಮಾರ್, ಬಾಹುಬಲಿ, ಶ್ರೀಕಾಂತ್, ಬೀರಣ್ಣ, ನಾರಾಯಣ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ವಿವಿಧ ಪೊಲೀಸ ತುಕಡಿಗಳಿಂದ ಫಥ ಸಂಚಲನ, ರಾಷ್ಟç ಧ್ವಜ ಹಾಗೂ ಪೊಲೀಸ್ ಧ್ವಜದ ಆಗಮನ, ಮುಖ್ಯ ಅತಿಥಿಗಳಿಗೆ ಸನ್ಮಾನ ಮಾಡಲಾಯಿತು. ಅಚ್ಚುಕಟ್ಟಾಗಿ ಸಂಗೀತ ವಾದ್ಯವನ್ನು ಯಂಕಪ್ಪ ಅವರ ನೇತೃತ್ವದಲ್ಲಿ ನಿರ್ವಹಣೆ ಮಾಡಲಾಯಿತು. ಕಾರ್ಯಕ್ರಮ ನಿರೂಪಣೆಯನ್ನು ಮಲ್ಲಿಕಾರ್ಜುನ ಅವರು ನಿರ್ವಹಣೆ ಮಾಡಿದರು.

Leave a Reply

Your email address will not be published. Required fields are marked *