ಮಸ್ಕಿ : ಪ್ರತಿನಿತ್ಯ ಸಾವಿರಾರು ಪ್ರಯಾಣಿಕರಿಗೆ ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸಲು ಶ್ರಮಿಸುವ ಚಾಲಕರ ಪರಿಶ್ರಮ ಅತ್ಯಂತ ಕಠಿಣ ವಾದದ್ದು ಎಂದು ಮಸ್ಕಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್. ಸಿದ್ದನಗೌಡ ತುರ್ವಿಹಾಳ ಹೇಳಿದರು.
ಮಸ್ಕಿ ಪಟ್ಟಣದಲ್ಲಿರುವ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಾರಿಗೆ ಘಟಕದಲ್ಲಿ ಶನಿವಾರ ಚಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಚಾಲಕರಿಗೆ ಹೂ ನೀಡಿ ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಪ್ರಯಾಣಿಕರ ಸುರಕ್ಷತೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ವಾಗಿ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬೇಕು ಚಾಲಕರ ಸೇವೆಯನ್ನು ಗುರುತಿಸಿ ಗೌರವಿಸಲು ಆದ್ದರಿಂದ ಸರ್ಕಾರ ಚಾಲಕರ ದಿನಾಚರಣೆ ಆಚರಿಸಲಾಗುತ್ತದೆ ಎಂದರು. ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಚಾಲಕರನ್ನು ಪ್ರೋತ್ಸಾಹಿಸಲು ಹಾಗೂ ಚಾಲಕರಿಗೆ ಸೇವೆಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಿಸ
ಲಾಗುತ್ತದೆ, ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸುವ ಚಾಲಕರಿಗೆ ಶುಭ ಹಾರೈಸಿದರು. ನಂತರ ಡಿಪೋ ವ್ಯವಸ್ಥಾಪಕ ಆದಪ್ಪ ಮಾತನಾಡಿ ಚಾಲಕರಿಗೆ ನೈತಿಕ ಸ್ಥೆರ್ಯ ತುಂಬುವ ಹಾಗೂ ಅವರ ಜವಾಬ್ದಾರಿಯುತ ಸೇವೆಯನ್ನು ಗೌರವಿಸುವ ಉದ್ದೇಶ
ದಿಂದ ಜನವರಿ 24ರಂದು ಚಾಲಕರ ದಿನ ಆಚರಣೆ ಮಾಡಲಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆಯೊಂದಿಗೆ ಪ್ರಯಾಣಿಕರ ನಂಬಿಕೆ ಗಳಿಸಿ, ಸೇವೆ ಸಲ್ಲಿಸುತ್ತಿರುವ ಚಾಲಕರ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು,ಅವರ ಕಾರ್ಯ ಜವಾಬ್ದಾರಿಯುತ ಮತ್ತು ಗೌರವಯುತ ಸೇವೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ , ಗ್ಯಾರಂಟಿ ಸಮಿತಿ ಅಧ್ಯಕ್ಷ ಮೈಬುಸಾಬ್ ಮುದ್ದಾಪುರ, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ಗ್ಯಾರಂಟಿ ಸದಸ್ಯ ಅಸ್ಲಾಂ ಪಾಷಾ, ನಾಗರತ್ನ ಕಟ್ಟಿಮನಿ , ಸಿಬ್ಬಂದಿ ಮೆಲ್ವಿಚಾರಕ ವಿರೇಶ್, ಲೆಕ್ಕ ಪತ್ರ ಮೆಲ್ವಿಚಾರಕ ಜಿಲಾನಿ, ಸಂಚಾರ ನಿರೀಕ್ಷಕ ನಾಗರಾಜ, ಕಿರಿಯ ಸಹಾಯಕ ನರಸಿಂಹ, ಚಾಲಕರಾದ‌ ಹುಸೇನ ಪಾಷಾ,ರಫೀ, ಶರಣಪ್ಪ ಇದ್ದರು.

Leave a Reply

Your email address will not be published. Required fields are marked *