ರಾಯಚೂರು ಜನವರಿ 24 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಫೆಬ್ರವರಿ 05, 06 ಹಾಗೂ 07ರವರೆಗೆ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಎಡೆದೊರೆ ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ, ವಿಚಾರ ಸಮಕಿರಣ, ಯುವಜನೋತ್ಸವದ ಮಹಾಸಂಭ್ರಮ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಕೃಷಿ ಮೇಳೆ-2026, ಫಲಪುಷ್ಪ ಪ್ರದರ್ಶನ & ಮತ್ಸ್ಯ ಮೇಳ, ಪಂಚ ಗ್ಯಾರಂಟಿ ಮೇಳ, ಆಹಾರ ಮೇಳ, ಉದ್ಯೋಗ ಮೇಳ, ಕರಕುಶಲ, ಕೈಗಾರಿಕೆ, ಪುಸ್ತಕ ಪ್ರದರ್ಶನ ಹಾಗೂ ಚಿತ್ರ ಸಂತೆ, ಕ್ರೀಡಾಕೂಟ, ಕವಿ ಮಹಿಳಾ ಮತ್ತು ಮಾಧ್ಯಮ ಗೋಷ್ಠಿ ನಡೆಯಲಿದೆ.
ಫಬ್ರವರಿ 05ರಂದು ಖ್ಯಾತ ಗಾಯಕರಾದ ಸಂಜಿತ್ ಹೆಗಡೆ, ಫೆಬ್ರವರಿ 06ರಂದು ರಾಜೇಶ್ ಕೃಷ್ಣನ್ ಹಾಗೂ ಫೆಬ್ರವರಿ 07ರಂದು ವಿಜಯ ಪ್ರಕಾಶ್ ಅವರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ರಾಯಚೂರು ಜಿಲ್ಲಾ ಉತ್ಸವ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *