ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಗಳನ್ನು ಕೂಡಿಸಲು ರಾಜ್ಯ ಸರ್ಕಾರ ಹಣ ನೀಡಿ ವಾಪಸ್ಸು ಪಡೆದಿದ್ದು ಯಾಕೆ ? ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ? ಎಂದು ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಅವರು, ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ನಾಡಗೌಡರು, ರಾಜ್ಯ ಸರ್ಕಾರ ರೈತರ ಜೊತೆಗೆ ಚೆಲ್ಲಾಟವಾಡುತ್ತಿದೆ. ಕೊಟ್ಟ ಹಣವನ್ನು ರಾಜ್ಯ ಸರ್ಕಾರ ಹಿಂಪಡೆಯಲು ಕಾರಣವಾದರೂ ಏನು? ಗುರುವಾರದಂದು ಆಂದ್ರಪ್ರದೇಶದ ಪ್ರತಿನಿಧಿಯಾಗಿ ಕನ್ನಯ್ಯನಾಯ್ಡು ಅವರು, ಟಿಬಿಡ್ಯಾಂ ಕ್ರಸ್ಟ್ ಗೇಟ್ ಗಳನ್ನು ಪರಿಶೀಲನೆಗೆ ಬಂದಾಗ ಕೆಲಗಾರರ ಸಂಖ್ಯೆ ಹೆಚ್ಚಿಸಲು ಗುತ್ತಿಗೆದಾರರನ್ನು ಕೇಳಿದಾಗ ಸರ್ಕಾರ ಹಣ ವಾಪಾಸು ಪಡೆದ ವಿಷಯ ಗೊತ್ತಾಗಿದ್ದು, ಈಗಾಗಲೇ ಮಾಧ್ಯಮದಲ್ಲಿ ಬಂದಿದೆ.
ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಆಂಧ್ರ ಸರ್ಕಾರ ತನ್ನ ಪಾಲಿನ 35 ಕೋಟಿ ರೂ.ನೀಡಿ, ಈಗಾಗಲೇ ಎರಡ್ಮೂರು ತಿಂಗಳು ಕಳೆದಿದೆ. ನಮ್ಮ ಸರ್ಕಾರ ಕೊಟ್ಟ ಹಣ ಹಿಂಪಡೆದ ವಿಚಾರ ತಿಳಿದು ಬೇಸರವಾಗಿದೆ. ನಮ್ಮ ರೈತರು ಸರ್ಕಾರದ ಕಾಳಜಿ ಅರ್ಥ ಮಾಡಿಕೊಳ್ಳಬೇಕು. ರೈತರ ಜೊತೆಗೆ ಚೆಲ್ಲಾಟ ಆಡುತ್ತಿದೆ.
ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸರಿಯಾದ ಸಮಯಕ್ಕೆ ಟಿಬಿಡ್ಯಾಂ ಕ್ರಸ್ಟ್ ಗೇಟ್ ಗಳನ್ನು ಕೂಡಿಸಿ ನೀರು ಕೊಡಬೇಕು. ಇಲ್ಲದಿದ್ದಲ್ಲಿ ರೈತರು ಸರ್ಕಾರಕ್ಕೆ ಸರಿಯಾದ ಪಾಠ ಕಲಿಸುತ್ತಾರೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದವರಿಗೆ ಸಂಬಳ ನೀಡಿಲ್ಲ. ಅವರು ವಿಷ ಕುಡಿಯಲು ಮುಂದಾಗಿದ್ದಾರೆ. ಹೊರಟಿದ್ದಾರೆ. ಅವರ ಬದುಕಿನ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಸರ್ಕಾರ ದಿವಾಳಿ ಆಗಿದೆ ಎಂದು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.

