ರಾಯಚೂರು ಜನವರಿ 23 (ಕರ್ನಾಟಕ ವಾರ್ತೆ): ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-02ರ ವ್ಯಾಪ್ತಿಯ ವಡವಟ್ಟಿ 110 ಕೆವಿ ಉಪ ಕೇಂದ್ರದಲ್ಲಿ ವಿದ್ಯುತ್ ಮಾರ್ಗದ ದುರಸ್ತಿ ಹಾಗೂ ಸುಧಾರಣೆ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ಜನವರಿ 24ರ ಬೆಳಿಗ್ಗೆ 10.30ರಿಂದ ಸಂಜೆ 6.30ವರೆಗೆ ಗಾಜಗಾರಪೇಟೆ, ಫಾರೂಕ್ ಅನ್ವರ್ ಕಂಪನಿ, ಕೊಲ್ಮಿ. ಚೌಡಮ್ಮಕಟ್ಟೆ, ಗಾಜಗಾರಪೇಟೆ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕಾರಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ನಿರಂತರ ಸೇವಾ ಕೇಂದ್ರ: 08532-226386,08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-02ರ ಸಹಾಯಕಕಾರ್ಯನಿರ್ವಾಹಕಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *