ಮಸ್ಕಿ :ಋಷಿ ದಂಪತಿಗಳಿಗೆ ಜನಿಸಿ ಅಲ್ಪಾಯುಷ್ಯ ಪಡೆದ ಮಾರ್ಕಂಡೇಯ ಜನಿಸಿದನು. ಆದರೆ ಇನ್ನೂ ಮಗುವಾಗಿದ್ದ ಮಾರ್ಕಂಡೇಯ್ಯ ಕಾಡಿಗೆ ಹೋಗಿ ಶಿವನನ್ನು ಭಕ್ತಿಯಿಂದ ಪೂಜಿಸಿ ಯಮಪಾಶದಿಂದ ತಪ್ಪಿಸಿಕೊಂಡು ಚಿರಂಜೀವಿಯಾಗಿ ಉಳಿದ ಎಂದು ಸಿಂಧನೂರು ಪದವಿ ಕಾಲೇಜಿನ ಸಾಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀದೇವಿ ಹೇಳಿದರು. ಪಟ್ಟಣದ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಾರ್ಕಂಡೇಶ್ವರ ಜಯಂತಿ ಕಾರ್ಯಕ್ರಮದ ವಿಶೇಷ ಉಪನ್ಯಾಸಕಿಯಾಗಿ ಮಾತನಾಡಿದ ಅವರು ಮಾರ್ಕಂಡೇಯ್ಯನು ಒಬ್ಬ ಮಾಹಾನ್ ಋಷಿಯಾಗಿದ್ದು ಪರಮಾತ್ಮನ ಕೃಪೆಯಿಂದ ಅಮರನಾಗಿ ಉಳಿಯಬುಹುದು ಎಂದು ಕಲಿಸಿದನು ಬಾಲ್ಯದಲ್ಲಿ ಮಕ್ಕಳ ಮನಸಿನಲ್ಲಿ ಭಕ್ತಿ ಗುಣಗಳನ್ನು ತುಂಬುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂಬುದಕ್ಕೆ ಮಾರ್ಕಂಡೇಯ ಸಾಕ್ಷಿ ಎಂದರು. ಅದೇ ರೀತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆ ನೂತನ ಅಧ್ಯಕ್ಷ ಸುರೇಶ ಹರಸೂರ ಯಾವುದೇ ಸಮಾಜ ಏಳಿಗೆಯಾಗಬೇಕಾದರೆ ಶಿಕ್ಷಣ ಮುಖ್ಯ ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವದು ತಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಅದೇರೀತಿ ಸಮಾಜದ ಅಧ್ಯಕ್ಷ ಲಕ್ಷ್ಮಣ ಕರ್ಲಿ, ಬಸವರಾಜ ಬುಕ್ಕಣ್ಣ, ಡಾ. ಶಂಕರ ಕರ್ಲಿ, ಮಲ್ಲಯ್ಯ ಪಗಡೇಕಲ್, ಪರಶುರಾಮ ಕೊಡುಗುಂಟಿ, ವೆಂಕಟೇಶ್ ಪಗಡೆಕಲ್, ಮಲ್ಲಿಕಾರ್ಜುನ ಶ್ಯಾಸಲ್, ಪರಶುರಾಮ್ ದೇವರೆಡ್ಡಿ,ಚಿನ್ನಪ್ಪ ಕರ್ಲಿ,ಮೀನಾಕ್ಷಿ ದೇವರೆಡ್ಡಿ, ನೇಕಾರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಪದ್ಮಶಾಲಿ ಸಮಾಜ ಭಾಂದವರು ಇದ್ದರು.

