ಅಂಬಿಗರ ಚೌಡಯ್ಯನವರ ಮೂಲ ಹೆಸರು ಚೌಡೇಶ ಚೌಡದಾನಪುರ ಗ್ರಾಮದ ರಾಣೇಬೆನ್ನೂರು ತಾಲೂಕಿನ ಹಾವೇರಿ ಜಿಲ್ಲೆಯಲ್ಲಿ ಜನಿಸಿದರು.12ನೇ ಶತಮಾನದ ಶಿವಶರಣರು ಹಾಗೂ ವಚನಕಾರರು. ವೃತ್ತಿಯಿಂದ ಅಂಬಿಗ ಪ್ರವೃತ್ತಿಯಿಂದ ವಚನಕಾರರು ಬಸವಣ್ಣನವರ ಅನುಭವ ಮಂಟಪದಲ್ಲಿ ಇದ್ದವರೆಂದು ಮುಖ್ಯ ಶಿಕ್ಷಕಿ ರೇಣುಕಗೌಡರ್ ಹೇಳಿದರು.
ಸುಕಾಲಪೇಟೆಯ ಪಿಎಂಶ್ರೀ ಉನ್ನತೀ ಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಅವರ ಜಯಂತಿ ಆಚರಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಬಸವಣ್ಣ ಅವರಿಂದ ಲಿಂಗದೀಕ್ಷೆಯನ್ನು ಪಡೆದವರು, ಕಾಯಕ ಅಂಬಿಗರ ಚೌಡಯ್ಯ ಎಂಬುದೇ ಇವರ ವಚನ ಅಂಕಿತವಾಗಿದೆ.
ವಚನಕಾರರಿಗಿಂತ ಭಿನ್ನ ವಿಶಿಷ್ಟ ವ್ಯಕ್ತಿ ಇವರದು, ಇವರ ವಚನಗಳನ್ನು ಮಕ್ಕಳು ಕಂಠ ಪಾಠ ಹೇಳಿದ್ದು ಬಹಳ ಸಂತೋಷ. ವಚನಗಳನ್ನ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಥಮ ತಂದೆ ಬಿ.ಶ್ರೀನಿವಾಸ ಮೂರನೇ ತರಗತಿ. ಮತ್ತು ನಾಗರತ್ನ ತಂದೆ ಮರಿಯಪ್ಪ ಆರನೇ ತರಗತಿ, ಪ್ರಥಮ ಬಹುಮಾನ, ಈಶ್ವರಿ ತಂದೆ ಬೀರಪ್ಪ ಮೂರನೇ ತರಗತಿ. ದ್ವಿತೀಯ ಬಹುಮಾನ ಮಹ್ಮದ್ ಆಶೀಫ್ ತಂದೆ ಪಕೂರುಸಾಬ್ ಮೂರನೇ ಕ್ಲಾಸ್ ತೃತೀಯ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಗಂಗೋತ್ರಿ ಪಟ್ಟಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವೆಂಕೋಬ ಜಿಬಾಳಿ ಬಹುಮಾನ ವಿತರಿಸಿದರು.
ಎಸ್.ಡಿಎಂಸಿ ಅಧ್ಯಕ್ಷ ಹೊನ್ನೂರು ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿಎಂಸಿ ಉಪಾಧ್ಯಕ್ಷೆ ನೇತ್ರಾವತಿ ಬಸವರಾಜ ವಿಶ್ವಕರ್ಮ, ಮುಖ್ಯ ಗುರುಗಳಾದ ಜಿ.ಗುರುಬಸಯ್ಯ. ವೆಂಕಟೇಶ ಸುಕಾಲಪೇಟೆ, ಶಿಕ್ಷಕರಾದ ಅಂಬಮ್ಮ, ಸುಧಾ ಎನ್.ಹುಳ್ಳಿ, ವೆಂಕನಗೌಡ, ಪದ್ಮಾವತಿ, ಮಮತಾ, ರೇಣುಕಾ, ದೈಹಿಕ ಶಿಕ್ಷಕ ಶೇಖರಪ್ಪ ಸೋಮಲಾಪುರ, ಸೇರಿದಂತೆ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
