ರಾಯಚೂರು ಜನವರಿ 20 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯಲ್ಲಿ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಜನವರಿ 21ರ ಮಧ್ಯಾಹ್ನ 4ಗಂಟೆಗೆ ನಗರದ ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳ ವೇಳಾ ಪಟ್ಟಿ, ಬ್ಯಾನರ್, ಪೋಸ್ಟರ್, ಬಲೂನ್, ಪ್ಯಾಂಪ್ಲೆಂಟ್, ಪಾಸ್, ಸಾಮಾಜಿಕ ಜಾಲತಾಣಗಳ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟನೆ ಸಮಾರಂಭವನ್ನು ಏರ್ಪಡಿಸಲಾಗಿದೆ.
ಈ ಉದ್ಘಾಟನೆ ಸಮಾರಂಭಕ್ಕೆ ಜಿಲ್ಲೆಯ ರೈತರು, ಸಾಹಿತಿಗಳು, ಮಾಧ್ಯಮದವರು, ಕವಿಗಳು, ಬುದ್ದಿ ಜೀವಿಗಳು, ವಿವಿಧ ಸಂಘಟನೆ ಮುಖ್ಯಸ್ಥರು, ಪದಾಧಿಕಾರಿಗಳು, ವ್ಯಾಪಾರಸ್ಥರು, ಕಾರ್ಮಿಕರು, ವಿವಿಧ ಕ್ಷೇತ್ರಗಳ ಸಾಧಕರು/ ಕಲಾವಿದರು ಹಾಗೂ ಸಾರ್ವಜನಿಕರು ಹಾಜರಾಗುವ ಜೊತೆಗೆ ಈ ಸಾಂಸ್ಕೃತಿಕ ಹಬ್ಬವು ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಾಗದೆ ಜಿಲ್ಲೆಯ ಪ್ರತಿಯೊಬ್ಬ ನಾಗರಿಕನೂ ಹೆಮ್ಮೆಪಡುವಂತಹ ಜನೋತ್ಸವವಾಗಿ ಮೂಡಿಬರಲು ತಾವುಗಳು ಪಾಲ್ಗೊಂಡು ಈ ಮಹತ್ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *