ಕಾರಟಗಿ ತಾಲೂಕು ಬೆನ್ನೂರು ಗ್ರಾಮದಲ್ಲಿ ಪ್ರಾರಂಭವಾದ ಅಕ್ರಮ ಮಧ್ಯ ಮಾರಾಟ ನಿಷೇಧ ಕ್ರಮವು ಇದೀಗ ಮಾದರಿಯಾಗಿ ಬೆಳೆಯುತ್ತಿದೆ. ಬೆನ್ನೂರು ಗ್ರಾಮದಲ್ಲಿ ಸಾರ್ವಜನಿಕರು ತಮಗೆ ತಾವೇ ಎಚ್ಚೆತ್ತುಕೊಂಡು ಅಕ್ರಮ ಮಧ್ಯ ಮಾರಾಟಕ್ಕೆ ಸಂಪೂರ್ಣ ತಡೆ ವಿಧಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಈ ಯಶಸ್ವಿ ಪ್ರಯತ್ನದಿಂದ ಪ್ರೇರಿತರಾಗಿ, ಕಾರಟಗಿ ತಾಲೂಕಿನ ಕುಂಟೋಜಿ ಹಾಗೂ ಈಳಿಗನೂರು ಗ್ರಾಮಗಳಲ್ಲಿಯೂ, ಜೊತೆಗೆ ಗಂಗಾವತಿ ತಾಲೂಕಿನ ಡಾನಾಪುರ ಗ್ರಾಮದಲ್ಲಿಯೂ ಸಾರ್ವಜನಿಕರು ಒಗ್ಗಟ್ಟಾಗಿ ಅಕ್ರಮ ಮಧ್ಯ ಮಾರಾಟವನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮಸ್ಥರು ಸಭೆ ನಡೆಸಿ, ಅಕ್ರಮ ಮಧ್ಯ ಮಾರಾಟವು ಸಮಾಜದ ಆರೋಗ್ಯ, ಕುಟುಂಬಗಳ ಶಾಂತಿ ಮತ್ತು ಯುವಜನರ ಭವಿಷ್ಯಕ್ಕೆ ಹಾನಿಕಾರಕವಾಗಿರುವುದನ್ನು ಚರ್ಚಿಸಿ, ಇದಕ್ಕೆ ಸಂಪೂರ್ಣ ತಡೆ ಹಾಕಬೇಕೆಂದು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ಗ್ರಾಮದ ಹಿರಿಯರು, ಮುಖಂಡರು ಹಾಗೂ ಸಾರ್ವಜನಿಕರು ಸೇರಿ ಅಕ್ರಮ ಮಧ್ಯ ಮಾರಾಟ ನಡೆಸುವವರಿಗೆ ಎಚ್ಚರಿಕೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಕ್ರಮ ಮಧ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲವೆಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಈ ಕ್ರಮದಿಂದ ಗ್ರಾಮಗಳಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವ ಮತ್ತಷ್ಟು ಬಲಪಡಿಸಿದೆ.
ಸಾರ್ವಜನಿಕರ ಈ ಸ್ವಯಂಪ್ರೇರಿತ ನಡೆ ಇತರ ಗ್ರಾಮಗಳಿಗೆ ಸಹ ಮಾದರಿಯಾಗಿದ್ದು, ಅಕ್ರಮ ಮಧ್ಯ ಮಾರಾಟ ನಿರ್ಮೂಲನೆಗೆ ಜನಸಹಭಾಗಿತ್ವವೇ ಅತ್ಯಂತ ಪರಿಣಾಮಕಾರಿ ಮಾರ್ಗ ಎಂಬುದನ್ನು ಸಾಬೀತುಪಡಿಸಿದೆ.

ವರದಿ : ಲಾಜರ್ ಸಿರಿಲ್

ಕಾರಟಗಿ ತಾಲೂಕಿನ ಬೆನ್ನೂರು ಇಳಿಗನೂರು ಕುಂಟೋಜಿ ಮತ್ತು ಗಂಗಾವತಿ ತಾಲೂಕಿನ ಡಾನಾಪುರ ಗ್ರಾಮಸ್ಥರ ಈ ಅಕ್ರಮ ಮಧ್ಯ ಮಾರಾಟ ನಿಷೇಧ ಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಅಕ್ರಮ ಮಧ್ಯ ಮಾರಾಟ ನಿರ್ಮೂಲನೆಗೆ ಜನ ಸಹಭಾಗಿತ್ವವೇ ಅತ್ಯಂತ ಪರಿಣಾಮಕಾರಿ ಮಾರ್ಗ ಯುವ ಸಮುದಾಯಕ್ಕೆ ದುಷ್ಪರಿಣಾಮ ಬೀರುತ್ತಿದ್ದ ಅಕ್ರಮ ಮಧ್ಯ ಮಾರಾಟ ನಿಷೇಧ ಸಾರ್ವಜನಿಕರ ತೀರ್ಮಾನ ಹರ್ಷ ತಂದಿದೆ ಸಾಬೀತಾಗಿದೆ.

ಶರಣಪ್ಪ ನಂದಿಹಳ್ಳಿ ಯುವ ಮುಖಂಡರು ಬೆನ್ನೂರು

Leave a Reply

Your email address will not be published. Required fields are marked *