ಮಾನ್ವಿ: ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಂಚಾರಿ ಡಿಜಿಟಲ್ ತಾರಾಲಯ ವತಿಯಿಂದ ನಡೆದ ಶಾಲೆಯ ಅಂಗಳದಲ್ಲೇ ತಾರಾಲಯ ಕಾರ್ಯಕ್ರಮವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಜಿಲ್ಲಾ ಸಂಚಲಕರಾದ ಗಣೇಶ ಬಗೋಡಿ ಚಾಲನೆ ನೀಡಿ ಮಾತನಾಡಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಭೌಗೋಳಿಕ ವಿಜ್ಞಾನ ಹಾಗೂ ಖಗೋಳ ವಿಜ್ಞಾನ ,ತಾರಾಲಯ ಕುರಿತು ,ಮನಮುಟ್ಟುವಂತೆ ಪರಿಣಮಾಕಾರಿಯಾಗಿ ತಿಳಿಸುವುದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ,ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೋಸೈಟಿ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ಸಂಚಾರಿ ಡಿಜಿಟಲ್ ತಾರಾಲಯ ಪ್ರದರ್ಶನ ವ್ಯವಸ್ಥೆ ಮಾಡಲಾಗಿದ್ದು ಶಾಲಾ ಮಕ್ಕಳು ತಾರೆ ಜಮೀನ್ ಪರ್ ಡಿಜಿಟಲ್ ಸಂಚಾರಿ ಸೌರವ್ಯೂಹ ಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಸೌರವ್ಯೂಹದ ಕುರಿತು ದೃಶ್ಯಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಾನ್ವಿ ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಾರೆ ಜಮೀನ್ ಪರ್ ಡಿಜಿಟಲ್ ಸಂಚಾರಿ ಸೌರವ್ಯೂಹ ಮಂದಿರವನ್ನು ವಿಕ್ಷಿಸಿದರು.
ಕಾರ್ಯಕ್ರಮದಲ್ಲಿ ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ.ಈ. ನರಸಿಂಹ, ಕಾರ್ಯದರ್ಶಿಗಳಾದ ವಿಜಯಲಕ್ಷ್ಮಿ ಸಹಕಾರ್ಯದರ್ಶಿ ರವಿವರ್ಮ, ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು, ತಾ.ಖಾ.ಶಿ.ಸಂ.ಒಕ್ಕೂಟದ ಪ್ರ.ಕಾರ್ಯದರ್ಶಿ ರಾಜು ತಾಳಿಕೋಟೆ,ಪಕ್ಷಿಪ್ರೇಮಿ ಸಲ್ಲಾವುದಿನ್ನ್ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಗುರುಗಳು ,ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

