ರಾಯಚೂರು ಜನವರಿ 12 (ಕರ್ನಾಟಕ ವಾರ್ತೆ): ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯಿಂದ 2019-20 ಹಾಗೂ 2024-25ನೇ ಸಾಲಿನ ಎಸ್.ಎಫ್.ಸಿ ನಿಧಿಯ ಶೇ.5ರ ಪರಿಷ್ಕೃತ ಕ್ರಿಯಾ ಯೋಜನೆಯಡಿ ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಡಿ ಪಾಲಿಕೆ ವ್ಯಾಪ್ತಿ ಪ್ರದೇಶದಲ್ಲಿ ಬರುವ ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.
2019-20 ಸಾಲಿನ ಶೇ.5ರಡಿ ಪರಿಶಿಷ್ಟ ಜಾತಿಯ ವಿಕಲಚೇತನರ ಮನೆಯ ಮೇಲ್ಚಾವಣೆ ದುರಸ್ಥಿಗಾಗಿ 2ಲಕ್ಷ ರೂ.ಗಳು ಹಾಗೂ 2024-25ನೇ ಸಾಲಿನ ಶೇ.5ರಡಿ ಪರಿಶಿಷ್ಟ ಜಾತಿಯ ವಿಕಲಚೇತನರ ಮನೆಯ ಮೇಲ್ಚಾವಣೆ ದುರಸ್ಥಿಗಾಗಿ 1.15ಲಕ್ಷ ರೂ.ಗಳನ್ನು ಕಾಯ್ದಿಸಲಾಗಿದೆ.
ದಾಖಲಾತಿಗಳು: ನಿಗದಿತ ನಮೂನೆಯಲ್ಲಿ ಅರ್ಜಿ, ದೃಢೀಕೃತ ಜಾತಿ ಮತ್ತು ಅದಾಯ ಪ್ರಮಾಣ ಪತ್ರ (ಪ್ರಸಕ್ತ ಚಾಲ್ತಿ ಸಾಲು), ದೃಢೀಕೃತ ವಾಸಸ್ಥಳಕ್ಕೆ ಗುರುತಿನ ಚೀಟಿ/ರೇಷನ್ ಕಾರ್ಡ್, ಪಾಸ್ ಫೋಟೋ ಅಳತೆಯ 2 ಭಾವ ಚಿತ್ರ, ಬ್ಯಾಂಕ್ ಪಾಸ್ ಪುಸ್ತಕ್ ಹಾಗೂ ಐ.ಎಫ್.ಎಸ್.ಸಿ ಕೋಡ್‌ನೊಂದಿಗೆ ಬ್ಯಾಂಕ್ ವಿವರ, ವೈದ್ಯರಿಂದ ಪಡೆದ ಗುರುತಿನ ಚೀಟಿ/ಯು.ಡಿ.ಎ. ಕಾರ್ಡ್, ವಿಕಲಚೇತನರ 1 ಭಾವಚಿತ್ರ, ಮನೆಯ ದುರಸ್ಥಿ ಮೇಲ್ಚಾವಣೆ ಛಾಯಾಚಿತ್ರ ಹಾಗೂ ಮೋಬೈಲ್ ನಂಬರ್ ನೊಂದಿಗೆ ಜನವರಿ 17ರೊಳಗಾಗಿ ಸಲ್ಲಿಸಬಹುದಾಗಿದೆ. ಅವದಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸರಿಯಾದ ದಾಖಲಾತಿಗಳು ಸಲ್ಲಿಸದೇ ಇದ್ದ ಪಕ್ಷದಲ್ಲಿ ತಮಗೆ ಯಾವುದೇ ಹಿಂಬರಹ ಕಳುಹಿಸದೇ ನೇರವಾಗಿ ವಿಭಾಗದ ಸಿಬ್ಬಂದಿಯವರು ತಿರಸ್ಕೃತ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ನೋಟಿಸ್ ಬೋರ್ಡ್ ನೋಡಬಹುದಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
