ರಾಯಚೂರು ಜನವರಿ 12 (ಕರ್ನಾಟಕ ವಾರ್ತೆ): ಜಿಲ್ಲೆಯ ದೇವದುರ್ಗ ತಾಲೂಕಿನ ಪಲಕನಮರಡಿ ಗ್ರಾಮದ ಶಿವಮೂರ್ತಿ ತಂದೆ ನಿಂಗಣ್ಣ (20) ಎಂಬ ಯುವಕ ರಾಯಚೂರಿನ ಯರಮರಸ್ ಕ್ಯಾಂಪನ ಬಿಸಿಎಮ್ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕರ ವಸತಿದಲ್ಲಿದ್ದು, 2025ರ ಏಪ್ರೀಲ್ 13ರ ಬೆಳಿಗ್ಗೆ 09:30 ಗಂಟೆಯಿಂದ ಹಾಸ್ಟೇಲ್ ನಿಂದ ಹೊರಗಡೆ ತನ್ನ ಸ್ನೇಹಿತರ ಸಂಗಡ ಯರಮರಸ್ ಕ್ಯಾಂಪ ವರೆಗೆ ಹೋಗಿದ್ದು, ತಾನು ರಾಯಚೂರುಗೆ ಹೋಗಿ ಬರುತ್ತೇನೆ ಅಂತಹ ತನ್ನ ಸ್ನೇಹಿತರಿಗೆ ಹೇಳಿ ಹೋದವನು ಇಲ್ಲಿಯವರೆಗೆ ಹಾಸ್ಟೇಲ್‌ಗೆ ಬರದೇ ಕಾಣೆಯಾಗಿದ್ದು, ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:57/2025ರಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವಕನ ಚಹರೆ: ವಯಸ್ಸು 20, ಜಾತಿ ಕುರುಬರು, ಉದ್ಯೋಗ ವಿದ್ಯಾರ್ಥಿ, ಗೋಧಿ ಬಣ್ಣ ಮೈ ಬಣ್ಣ, ದುಂಡನೇಯ ಮುಖ, ತಲೆಯಲ್ಲಿ ಕಪ್ಪು ಕೂದಲು, ಬಿಳಿ ಬಣ್ಣದ ಲೈನ್ ಫುಲ್ ಶರ್ಟ್, ಕಪ್ಪು ಬಣ್ಣದ ಫ್ಯಾಂಟ್, ಗುಲಾಬಿ ಬಣ್ಣದ ಟವೆಲ್ ಕೊರಳಲ್ಲಿ ಧರಿಸಿದ್ದು, ಕನ್ನಡ, ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ಈ ಯುವಕನ ಬಗ್ಗೆ ಸುಳಿವು ಕಂಡುಬಂದಲ್ಲಿ ಪಿ.ಎಸ್.ಐ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಮೊಬೈಲ್ ಸಂಖ್ಯೆ: 9480803850, ಹಾಗೂ ಸಿ.ಪಿ.ಐ. ಗ್ರಾಮೀಣ ವೃತ್ತ ರಾಯಚೂರು ಮೊಬೈಲ್: 9480803832ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ಗ್ರಾಮೀಣ ವೃತ್ತ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

