ರಾಯಚೂರು ಜನವರಿ 12 (ಕರ್ನಾಟಕ ವಾರ್ತೆ): ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-2ರ ವ್ಯಾಪ್ತಿಯ 110ಕೆವಿ 110/11ಏಗಿ, ಎಂಯುಎಸ್‌ಎಸ್, ಎಪಿಎಂಸಿ ಯಾರ್ಡ್ದ ಡ್ರಾಗ್‌ಹೌಸ್ ಲಿಂಕ್ ಲೈನ್ ವಿಭಜನೆ ಕಾಮಗಾರಿಯನ್ನು ಕೈಗೊಂಡ ಪ್ರಯುಕ್ತ ಜನವರಿ 13ರ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯ ಅಲ್ಲಮಪ್ರಭು ಕಾಲೋನಿ, ಪೋತಗಲ್ ರೋಡ, ಎಲ್.ಬಿ.ಎಸ್. ನಗರ, ಅಲಿ ಕಾಲೋನಿ, ಚಂದ್ರಬಂಡ ರಸ್ತೆ, ಆಶ್ರಯ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 24*7ಗ್ರಾಹಕರ ನಿರಂತರ ಸೇವಾ ಕೇಂದ್ರ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
