ಮಸ್ಕಿ ಜ 10 ನೂತನ ರಾಯಚೂರು ಜಿಲ್ಲೆಯ ಪೊಲೀಸ್ ವರಿಷ್ಠಧಿಕಾರಿಗಳಾದ ಅರುಣವಂಶ ಗೀರಿ ಐಪಿಎಸ್ ಮಸ್ಕಿ ಪೊಲೀಸ್ ಠಾಣಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು, ನಂತರ ಪಾಟೀಲ್ ನ್ಯೂಸ್ ಆಲರ್ಟ ಸುದ್ದಿಯೊಂದಿಗೆ ಮಾತನಾಡುತ್ತಾ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಕಾನೂನು ಸುವ್ಯವಸ್ಥೆ ಸರಿಯಾಗಿ ಕಾಪಾಡುವುದು, ಪೊಲೀಸ್ ಸಿಬ್ಬಂದಿಗಳು ಕರ್ತವ್ಯವನ್ನು ಸರಿಯಾಗಿ ಪಾಲಿನೆ ಮಾಡಿ ಠಾಣೆಯ ವ್ಯಾಪ್ತಿಯೊಳಗಡೆ ಆದಷ್ಟು ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಬೇಕು, ಇತ್ತೀಚಿಗೆ ಮುಖ್ಯವಾಗಿ ಮೊಬೈಲ್ ಹಾಕಿಂಗ್ ಆಗಿ ಹಣ ಮತ್ತು ವೈಯಕ್ತಿಕ ದಾಖಲೆಗಳು ಸೈಬರ್ ಕ್ರೈಂ ಹೆಚ್ಚಾಗುತ್ತಿರುವ ಕಾರಣ ನಾಗರಿಕರು ಮೊಬೈಲನ್ನ ಸರಿಯಾಗಿ ಬೆಳೆಸಿಕೊಳ್ಳಬೇಕು ಹಾಗೇನಾದರೂ ತೊಂದರೆ ಉಂಟಾದರೆ ತಕ್ಷಣವೇ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು ಹಾಗೂ ಇನ್ನಿತರ ವಿಷಗಳನ್ನು ಪಾಟೀಲ್ ನ್ಯೂಸ್ ಅಲರ್ಟ್ ಸುದ್ದಿಯೊಂದಿಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ಗಳಾದ ಅರುಣವಂಶಿ ಗಿರಿ ಐಪಿಎಸ್ ಮಾತನಾಡಿದರು, ಈ ಸಂದರ್ಭದಲ್ಲಿ ಲಿಂಗಸೂರ್ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಮಸ್ಕಿ ಸರ್ಕಲ್ ಇನ್ಸ್ಪೆಕ್ಟರ್ ರಾಮಣ್ಣ, ಪಿಎಸ್ಐ ರಂಗಯ್ಯ ಕೆ ಹಾಗೂ ಸಿಬ್ಬಂದಿ ವರ್ಗ ಇದ್ದರು.

