ರಾಯಚೂರು ಜನವರಿ 07 (ಕರ್ನಾಟಕ ವಾರ್ತೆ): ಇಲ್ಲಿನ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದಲ್ಲಿ ಖಾಲಿ ಇರುವ ನಾಗರಿಕ ಸಮಾಜದ ಸದಸ್ಯರ ಆಯ್ಕೆಗೆ ಅರ್ಜಿ ಅಹ್ವಾನಿಸಲಾಗಿದೆ.
ರಾಜಕೀಯೇತರ, ಸಮಾಜ ಸೇವೆಯಲ್ಲಿ ತೊಡಗಿರುವ ಸಾಮಾಜಿಕ ಬದ್ದತೆಯುಳ್ಳ ಗಣ್ಯ ವ್ಯಕ್ತಿಗಳಾಗಿರುವ ಸಾರ್ವಜನಿಕರು ತಮ್ಮ ವೈಯಕ್ತಿಕ ದಾಖಲಾತಿಗಳೊಂದಿಗೆ ಸವಿವರವನ್ನು ಪೊಲೀಸ್ ಅಧೀಕ್ಷಕರು ರಾಯಚೂರು ಜಿಲ್ಲೆ ಇವರ ಕಚೇರಿಗೆ 15 ದಿನಗಳೊಳಗೆ ಸಲ್ಲಿಸುವಂತೆ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
