ಹೆರಿಗೆ ಎಂಬುದು ಪ್ರತಿ ಗರ್ಬಿಣಿ ಮಹಿಳೆಯ ಜಿವನದಲ್ಲಿ ಒಂದು ಪುನರ್ಜನ್ಮವಿದ್ದಂತೆ, ಪ್ರಸ್ತುತ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗಾಗಿ ಇರುವ ಸುಸಜ್ಜಿತ ಹೆರಿಗೆ ಕೊಠಡಿ, ಬಿಸಿನೀರು ಸೌಲಭ್ಯ, ನುರಿತ ತಜ್ಞ ವೈದ್ಯರು, ಹಾಗೂ ಸಿಬ್ಬಂದಿಯವರ ಸೇವೆ ಹಾಗೂ ಹೆರಿಗೆ ನಂತರ ಮಕ್ಕಳನ್ನು ಬೆಚ್ಚಗಿಡಲು ಬೆಬಿ ವಾರ್ಮರ್ ವ್ಯವಸ್ಥೆಯನ್ನು ಕರ್ನಾಟಕ ಸರಕಾರವು ಎಲ್ಲ ಅರೋಗ್ಯ ಕೇಂದ್ರಗಳಲ್ಲಿ ಕಲ್ಪಿಸಿದ್ದು ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ತೆರಳದೆ ಹತ್ತಿರದ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲು ತಪಾಸಣೆಯ ಸಂದರ್ಭದಲ್ಲಿ ಗರ್ಭಿಣಿಯೊಂದಿಗೆ ಆಗಮಿಸುವ ಪಾಲಕರಿಗೆ ನಿರಂತರ ಮಾಹಿತಿಯನ್ನು ನೀಡಿ ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರ ಬಾಬು ಅರಕೆರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಯರಿಗೆ ತಿಳಿಸಿದರು.
ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳೀಯ ಆಡಳಿತದ ಅಧಿಕಾರಿಗಳೊಂದಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಗೆ ಆಗಮಿಸಿದ ಸಾರ್ವಜನಿಕರೊಂದಿಗೆ ಮಾತನಾಡಿ ತದನಂತರ ವೈದ್ಯರು ಹಾಗೂ ಸಿಬ್ಬಂದಿಯರೊಂದಿಗೆ ಮಾತನಾಡುತ್ತಾ,
ಒಂದು ಜೀವಕ್ಕೆ ಜನ್ಮ ನೀಡುವ ತಾಯ್ತನದ ಅತ್ಯಂತ ಮಹತ್ವದ ಘಟ್ಟವಾದ ಹೆರಿಗೆಯು ಸುರಕ್ಷಿತವಾಗಿರಲು ಸಹಕಾರಿಯಾಗಲು ಅರಕೇರಾ ಸೇರಿದಂತೆ ಜಿಲ್ಲೆಯ ಎಲ್ಲ ಅರೋಗ್ಯ ಕೇಂದ್ರಗಳಲ್ಲಿ ರಕ್ತ ಪರೀಕ್ಷೆ, ರಕ್ತದೊತ್ತಡ, ಹೆಚ್‌ಐವಿ, ಸಕ್ಕರೆ ಕಾಯಿಲೆ, ಮುಂತಾದವುಗಳ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಹೆರಿಗೆ ಸಂಧರ್ಭದಲ್ಲಿ ಉಂಟಾಗುವ ಅಪಾಯಕಾರಿ ಸನ್ನಿವೇಶಗಳನ್ನು ನಿವಾರಿಸಲು ವೈದ್ಯರ ಸಲಹೆ ಮೇರೆಗೆ ಗರ್ಭಿಣಿಯರ ಪರೀಕ್ಷೆ ಮಾಡಿಸುವ ಮೂಲಕ ಅಪಾಯಕಾರಿ ಚಿನ್ಹೆಗಳನ್ನು ಗುರ್ತಿಸಿ ಅಗತ್ಯ ಚಿಕಿತ್ಸೆ ಪಡೆಯುವಂತೆ ಒಂದು ವೇಳೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದಲ್ಲಿ ದೇವದುರ್ಗ ಅಥವಾ ರಾಯಚೂರುನ ರಿಮ್ಸ್ ಆಸ್ಪತ್ರೆ, ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ತಜ್ಞವೈದ್ಯರ ಸಮನ್ವಯದೊಂದಿಗೆ ಹೆರಿಗೆ ಮಾಡಿಸಲು ತಕ್ಷಣ ಕಳುಹಿಸಿ ಕೊಡಲು ಆಂಬ್ಯುಲೆನ್ಸ್ ಮೂಲಕ ಕಳುಹಿಸಿ ಕೊಡುವ ವ್ಯವಸ್ಥೆಯನ್ನು ಸಾರ್ವಜನಿಕರು ಸದುಪಯೋಗ ಪಡೆದು ಕೊಂಡು ಹಣ ಹಾಗೂ ಸಮಯದ ಉಳಿತಾಯ ಮಾಡಿಕೊಳ್ಳಲು ಜನತೆಗೆ ತಿಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಕೆ, ಪಿಡ್ಲ್ಯುಡಿ ಕಾರ್ಯಪಾಲಕ ಅಭಿಯಂತರರು, ಆಡಳಿತ ವೈದ್ಯಾಧಿಕಾರಿ ಡಾ ಶಂಶುದ್ದೀನ್, ಕಂದಾಯ ನಿರೀಕ್ಷಕರಾದ ರವಿ, ಡಾ ಬನರಾಜ್, ಗ್ರಾಮ ಆಡಳಿತಾಧಿಕಾರಿ ಬಸವರಾಜ, ಎಫ್‌ಡಿಎ ಅಣಜಪ್ಪ, ಚಿರಂಜೀವಿ ಆಪ್ತಸಮಾಲೋಚಕ, ಆರೋಗ್ಯ ಮಿತ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

