ರಿಮ್ಸ್ ಸಂಸ್ಥೆಯಿಂದ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ ರಾಯಚೂರು ಜನವರಿ 01 (ಕರ್ನಾಟಕ ವಾರ್ತೆ): ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ 2025-2026ನೇ ಸಾಲಿನಲ್ಲಿ ಕೆಇಎ ಮೂಲಕ ಎಲ್ಲಾ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿಕೆಯಾಗಿರುವ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ಗಳ ಸೀಟುಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಿ.ಎಸ್ಸಿ ಅರವಳಿಕೆ ಮತ್ತು ಆಪರೇಷನ್ ಥಿಯೇಟರ್ ಟೆಕ್ನಾಲಜಿ 10, ಬಿ.ಎಸ್ಸಿ ತುರ್ತು ಮತ್ತು ಟ್ರಾಮಾಕೇರ್ ಟೆಕ್ನಾಲಜಿ 10, ಬಿ.ಎಸ್ಸಿ ಕಾರ್ಡಿಯಾಕ್ ಕೇರ್ ಟೆಕ್ನಾಲಜಿ 10, ಬಿ.ಎಸ್ಸಿ ವೈದ್ಯಕೀಯ ಇಮೇಜಿಂಗ್ ಟೆಕ್ನಾಲಜಿ 10, ಬಿ.ಎಸ್ಸಿ ವೈದ್ಯಕೀಯ ಪ್ರಯೋಗಾಲಯ ಟೆಕ್ನಾಲಜಿ 20, ಬಿ.ಎಸ್ಸಿ ಆಪ್ಟೋಮೆಟ್ರಿ 20, ಬಿ.ಎಸ್ಸಿ ಮೂತ್ರಪಿಂಡದ ಡಯಾಲಿಸಿಸ್ ಟೆಕ್ನಾಲಜಿ 10, ಬ್ಯಾಚುಲರ್ ಆಫ್ ಪಬ್ಲಿಕ್ ಹೆಲ್ತ್ 20 ಸೇರಿದಂತೆ ಒಟ್ಟು 110 ಸೀಟುಗಳು ಹೊಸದಾಗಿ ಮಂಜೂರಾಗಿದ್ದು, ಕರ್ನಾಟಕ ಪರಿಕ್ಷಾ ಪ್ರಾಧಿಕಾರದ ವತಿಯಿಂದ ಅಂತಿಮ ಸುತ್ತಿನ ಸೀಟುಗಳ ಹಂಚಿಕೆಯನ್ನು ವಾಕ್-ಇನ್ ಅಡ್ಮಿಷನ್ ಮೂಲಕ ಕೈಗೊಳ್ಳಲು ಬೆಂಗಳೂರಿನ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಆದೇಶಿಸಿದ್ದು, ಈ ಆದೇಶದಂತೆ ಜನವರಿ 8ರ ಸಂಜೆ 4ಗಂಟೆಯೊಳಗಾಗಿ ಆಸಕ್ತ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. ದಿನಾಂಕ 09.01.2026 ಬೆಳ್ಳಿಗ್ಗೆ 11 ಗಂಟೆ ನಂತರ ನೊಂದಾಯಿತ ಅಭ್ಯರ್ಥಿಗಳ ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ಸೀಟು ಆಯ್ಕೆಮಾಡಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ರಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿ ಅನಿಲ ಕುಮಾರ ಮೊಬೈಲ್ ಸಂಖ್ಯೆ:8951772705ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bynaijyadese

Jan 1, 2026

ರಾಯಚೂರು ಜನವರಿ 01 (ಕರ್ನಾಟಕ ವಾರ್ತೆ): ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ 2025-2026ನೇ ಸಾಲಿನಲ್ಲಿ ಕೆಇಎ ಮೂಲಕ ಎಲ್ಲಾ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿಕೆಯಾಗಿರುವ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ಗಳ ಸೀಟುಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಿ.ಎಸ್ಸಿ ಅರವಳಿಕೆ ಮತ್ತು ಆಪರೇಷನ್ ಥಿಯೇಟರ್ ಟೆಕ್ನಾಲಜಿ 10, ಬಿ.ಎಸ್ಸಿ ತುರ್ತು ಮತ್ತು ಟ್ರಾಮಾಕೇರ್ ಟೆಕ್ನಾಲಜಿ 10, ಬಿ.ಎಸ್ಸಿ ಕಾರ್ಡಿಯಾಕ್ ಕೇರ್ ಟೆಕ್ನಾಲಜಿ 10, ಬಿ.ಎಸ್ಸಿ ವೈದ್ಯಕೀಯ ಇಮೇಜಿಂಗ್ ಟೆಕ್ನಾಲಜಿ 10, ಬಿ.ಎಸ್ಸಿ ವೈದ್ಯಕೀಯ ಪ್ರಯೋಗಾಲಯ ಟೆಕ್ನಾಲಜಿ 20, ಬಿ.ಎಸ್ಸಿ ಆಪ್ಟೋಮೆಟ್ರಿ 20, ಬಿ.ಎಸ್ಸಿ ಮೂತ್ರಪಿಂಡದ ಡಯಾಲಿಸಿಸ್ ಟೆಕ್ನಾಲಜಿ 10, ಬ್ಯಾಚುಲರ್ ಆಫ್ ಪಬ್ಲಿಕ್ ಹೆಲ್ತ್ 20 ಸೇರಿದಂತೆ ಒಟ್ಟು 110 ಸೀಟುಗಳು ಹೊಸದಾಗಿ ಮಂಜೂರಾಗಿದ್ದು, ಕರ್ನಾಟಕ ಪರಿಕ್ಷಾ ಪ್ರಾಧಿಕಾರದ ವತಿಯಿಂದ ಅಂತಿಮ ಸುತ್ತಿನ ಸೀಟುಗಳ ಹಂಚಿಕೆಯನ್ನು ವಾಕ್-ಇನ್ ಅಡ್ಮಿಷನ್ ಮೂಲಕ ಕೈಗೊಳ್ಳಲು ಬೆಂಗಳೂರಿನ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಆದೇಶಿಸಿದ್ದು, ಈ ಆದೇಶದಂತೆ ಜನವರಿ 8ರ ಸಂಜೆ 4ಗಂಟೆಯೊಳಗಾಗಿ ಆಸಕ್ತ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ದಿನಾಂಕ 09.01.2026 ಬೆಳ್ಳಿಗ್ಗೆ 11 ಗಂಟೆ ನಂತರ ನೊಂದಾಯಿತ ಅಭ್ಯರ್ಥಿಗಳ ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ಸೀಟು ಆಯ್ಕೆಮಾಡಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ರಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿ ಅನಿಲ ಕುಮಾರ ಮೊಬೈಲ್ ಸಂಖ್ಯೆ:8951772705ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *