ಲಿಂಗಸ್ಗೂರಿನ ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಸಿದ್ಧವಾಗಿದ್ದು ಅದರ ಮುಂಭಾಗದ ರಸ್ತೆಯಿಂದ ಆಸ್ಪತ್ರೆಗೆ ಹೋಗುವ ಗೇಟಿನ ಮುಂದುಗಡೆ ವಿದ್ಯುತ್ ಕಂಬವಿದ್ದು ಅದನ್ನು ತೆರವುಗೊಳಿಸದೆ ಕಾಂಕ್ರೀಟ್ ಹಾಕಿ ಸಿಸಿ ರಸ್ತೆಯನ್ನ ಆಸ್ಪತ್ರೆಯ ಮುಂದಿನ ಗೇಟ್ನಿಂದ ಮೇನ್ ರೋಡ್ ಮಾಡಿರುವುದು ಅನಾಹುತಕ್ಕೆ ಕಾರಣವಾಗಲಿದೆ. ಆಸ್ಪತ್ರೆ ಎಂದರೆ ಆಂಬುಲೆನ್ಸ್ ಗಳು ಇನ್ನಿತರ ವಾಹನಗಳು ಮತ್ತು ತುರ್ತಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬರುವಂತಹ ವಾಹನಗಳಿಗೆ ಅನಾನುಕೂಲವಾಗಲಿದ್ದು ಆ ವಿದ್ಯುತ್ ಕಂಬವನ್ನು ಕೂಡಲೇ ಸ್ಥಳಾಂತರಿಸಬೇಕು. ಅದರ ಪಕ್ಕದಲ್ಲಿ ಇರುವಂತ ಇನ್ನೊಂದು ಕಂಬಕ್ಕೂ ಮತ್ತು ಈ ಕಂಬಕ್ಕೂ ಇರುವ ವಿದ್ಯುತ್ ತಂತಿಗಳು ಕೆಳಗಡೆ ಇಳಿ ಬಿದ್ದಿದ್ದು, ಮುಖ್ಯರಸ್ತೆಯ ಪಕ್ಕದಲ್ಲಿಯೇ ಇರುವ ಕಾರಣ ಹುಲ್ಲಿನ ಟ್ಯಾಕ್ಟರ್ ಗಳು ಅಲ್ಲಿಂದ ಹಾದು ಹೋಗುವಾಗ ದೊಡ್ಡ ಅನಾಹುತ ಆಗುವ ಸಾಧ್ಯತೆ ಇದೆ. ತಾಲೂಕಿನ ಜೆಸ್ಕಾಂ ಅಧಿಕಾರಿಗಳು ನಿಸ್ಕ್ರಿಯವಾಗಿರುವುದಕ್ಕೆ ಇದೊಂದು ನಿದರ್ಶನ ಅಂತಾನೆ ಹೇಳಬಹುದು.
ಸಾರ್ವಜನಿಕರೇ ಹಿತದೃಷ್ಟಿಯಿಂದ ಇಳಿಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಿ ಆಸ್ಪತ್ರೆಯ ಮುಂಭಾಗದಲ್ಲಿರುವಂತ ವಿದ್ಯುತ್ ಕಂಬವನ್ನು ಸ್ಥಳಾಂತರಿಸಬೇಕೆಂದು ಸಾರ್ವಜನಿಕರ ಕೋರಿಕೆ…ಕೂಡಲೇ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ…

