ಸಿಂಧನೂರು : ಸೋಲಿಡಾಡಿಟಿ ಯೂತ್ ಮೂವ್ಮೆಂಟ್ ಸಿಂಧನೂರು ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಇಂದು ,ಶ್ರೀ ಬಸನಗೌಡ ಬಾದರ್ಲಿ(ಶಾಸಕರು ,ವಿಧಾನ ಪರಿಷತ್ , ಕರ್ನಾಟಕ) ಅವರನ್ನು ಭೇಟಿಯಾಗಿ, ಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸೈಬರ್ ವಂಚನೆ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಯನ್ನು ನಡೆಸುವಂತೆ ಹಾಗೂ ಈ ಕುರಿತು ಕಠಿಣ ಮತ್ತು ಪರಿಣಾಮಕಾರಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿರುವ ಅಗತ್ಯವನ್ನು ಮನವಿ ಮಾಡಿದರು..ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್, ಆನ್‌ಲೈನ್ ಬ್ಯಾಂಕಿಂಗ್, ಯುಪಿಐ ಪಾವತಿ, ಸೋಷಿಯಲ್ ಮೀಡಿಯಾ ಮತ್ತು ಇ-ಕಾಮರ್ಸ್ ಸೇವೆಗಳು ನಮ್ಮ ದಿನನಿತ್ಯ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಸ್ಮಾರ್ಟ್‌ ಫೋನ್‌ಗಳ ವ್ಯಾಪಕ ಬಳಕೆ, ಡಿಜಿಟಲ್ ಜ್ಞಾನದ ಕೊರತೆ, ಅತಿಯಾದ ನಂಬಿಕೆ ಹಾಗೂ ತಾಂತ್ರಿಕ ಅರಿವಿನ ಕೊರತೆಯಿಂದ ಎಲ್ಲಾ ವಯೋಮಾನದ ಜನರು ಸೈಬರ್ ವಂಚನೆಗೆ ದೊಡ್ಡ ಪ್ರಮಾಣದಲ್ಲಿ ಬಲಿಯಾಗುತ್ತಿದ್ದಾರೆ. ಇದರಿಂದ ಸಾವಿರಾರು ಜನರು ಅರ್ಥಿಕ, ಸಾಮಾಜಿಕ ಮತ್ತು ಮಾನಸಿಕ ಹಾನಿಗೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಗಂಭೀರತೆ ಕರ್ನಾಟಕವು ದೇಶದಲ್ಲಿ ಎರಡನೇ ಅತಿ ಹೆಚ್ಚು ಸೈಬರ್ ಅಪರಾಧಗಳು ನಡೆಯುವ ರಾಜ್ಯವಾಗಿದೆ. ಪ್ರಮುಖ ಅಂಶಗಳು: 1. ಪ್ರಕರಣಗಳು
2024ರಲ್ಲಿ: 22,472 ಪ್ರಕರಣಗಳು
2025 (ಜುಲೈ ವರೆಗೆ): 8,620 ಪ್ರಕರಣಗಳು 2. ವಂಚಕರ ಬಂಧನದ ಅತ್ಯಂತ ಕಡಿಮೆ ಪ್ರಮಾಣ 202400: 771 20
2025 (ಜುಲೈವರೆಗೆ): 357 ಬಂಧನ
ಕಳೆದ ಎರಡು ವರ್ಷಗಳಲ್ಲಿ ಒಟ್ಟು ಕೇವಲ 23 ವಂಚಕರಿಗೆ ಮಾತ್ರ ಶಿಕ್ಷೆ ಇದರಿಂದ ಅವರಾಧಿಗಳಿಗೆ ಅನುಕೂಲವಾಗುತ್ತಿದೆ.
3. ಸಾರ್ವಜನಿಕರು ಕಳೆದುಕೊಂಡಿರುವ ಹಣ
2024 : ₹2,515,48,49,720
2025 ( ㎡): ₹1,287,50,89,854
ವಶಪಡಿಸಿಕೊಂಡಿದ್ದು:
2024: 23,46,22,09,274
2025 ( ): 21,09,36,47,238
ಇದು ಸರ್ಕಾರ ನೀಡಿದ ಕೇವಲ ಅಧಿಕೃತ ಮಾಹಿತಿ ಮಾತ್ರ. ಈ ಅಂಕಿಅಂಶಗಳ ಹಿಂದೆ ನಿಜವಾಗಿ ಎಷ್ಟೋ ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಜನರ ಶ್ರಮಪಟ್ಟು ಗಳಿಸಿದ ಹಣ ವಂಚನೆಗೆ ಒಳಗಾಗುತ್ತಿದೆ. ಅನೇಕ ಪ್ರಕರಣಗಳು ದಾಖಲಾಗದೇ ಉಳಿಯುತ್ತಿವೆ; ಭಯ, ಲಜ್ಜೆ, ಹಾಗೂ ಕ್ರಮ ಕೈಗೊಳ್ಳುವಲ್ಲಿ ಆಗುವ ತೊಂದರೆಗಳಿಂದ ಜನರು ದೂರು ನೀಡದೇ ಮೌನವಾಗುತ್ತಾರೆ. ಆದ್ದರಿಂದ, ವಾಸ್ತವಿಕ ಹಾನಿಯ ಪ್ರಮಾಣ ಸರ್ಕಾರದ ಸಂಖ್ಯೆಗಳಿಗಿಂತ ಬಹಳ ಮಿಗಿಲಾಗಿದೆ. ಸೈಬರ್ ಅಪರಾಧದ ಪ್ರಮಾಣ ಮತ್ತು ಅದರಿಂದ ಉಂಟಾಗುತ್ತಿರುವ ಆರ್ಥಿಕ ಹಾನಿ ರಾಜ್ಯದ ಪ್ರತಿ ಕುಟುಂಬಕ್ಕೂ ನೇರವಾಗಿ ತಲುಪುತ್ತಿರುವ ಗಂಭೀರ ಬೆದರಿಕೆಯಾಗಿದೆ. ಹಲವಾರು ನಾಗರಿಕರು ಕೋಟ್ಯಾಂತರ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳು ಹೆಚ್ಚುತ್ತಿವೆ ಇದು ನೈಬರ್ ಅಪರಾಧದ ಭಯಾನಕ ಸಾಮಾಜಿಕ ಆಯಾಮವನ್ನು ತೋರಿಸುತ್ತದೆ.
ಈ ಎಲ್ಲಾ ತಂತ್ರಗಳನ್ನು ಬಳಸಿಕೊಂಡು ನೈಬರ್ ಅಪರಾಧಿಗಳು ಜನರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುವುದು, ವೈಯಕ್ತಿಕ ಮಾಹಿತಿಯನ್ನು ದುರುಪಯೋಗ ಮಾಡುವುದು, ಬೆದರಿಕೆ ಹಾಕುವುದು, ಮಾನಹಾನಿ ಮತ್ತು ನಾಮಾಜಿಕ ಅಶಾಂತಿ ಉಂಟುಮಾಡುವಂತಹ ಗಂಭೀರ ಕೃತ್ಯಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.
ಬೇಡಿಕೆಗಳು: 1. ಡಿಸೆಂಬರ್ 8/2025 ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಇದನ್ನು ಚರ್ಚಿಸಿ ಕಠಿಣ ಕ್ರಮ ಕೈಗೊಳ್ಳಬೇಕು
2. ನೈಬರ್ ವಂಚನೆಯ ಪರಿಣಾಮವಾಗಿ ಜನರು ಕಷ್ಟಪಟ್ಟು ಕೂಡಿಟ್ಟ ಹಣವನ್ನು ಕಳೆದುಕೊಂಡು ಭಯಭೀತರಾಗುತ್ತಿದ್ದಾರೆ; ಕೆಲವರು ಆತ್ಮಹತ್ಯೆಗೆ ಸಹ ಶರಣಾಗುತ್ತಿದ್ದಾರೆ. ಜನರ ಹಣದ ಭದ್ರತೆಗೆ ಸರ್ಕಾರವು ಸ್ಪಷ್ಟವಾದ ರಕ್ಷಣಾ ಕ್ರಮಗಳು ಮತ್ತು ಖಾತರಿಯನ್ನು ಒದಗಿಸಬೇಕು.
3. ಗೋಲ್ಡನ್ ಅವರ್‌ನ ಪ್ರಯೋಜನವನ್ನು ನಮರ್ಪಕವಾಗಿ ಬಳಸಲು ರಾಷ್ಟ್ರೀಯ ಮಟ್ಟದ ಸಹಾಯವಾಣಿಯ ಬದಲಿಗೆ ರಾಜ್ಯ ಸರ್ಕಾರವೇ ಪ್ರತ್ಯೇಕ ಸಹಾಯವಾಣಿ ಸಂಖ್ಯೆಯನ್ನು ಒದಗಿಸಬೇಕು.
4. ಸಾಮಾಜಿಕ ಜಾಲತಾಣಗಳ ಹ್ಯಾಕಿಂಗ್‌ನ್ನು ವಂಚನೆ ತಡೆಯಲು ಯುವಕರು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ತಮ್ಮನ್ನೂ ಇತರರನ್ನೂ ರಕ್ಷಿಸುವ ಕ್ರಮಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಬೇಕು.
5. ಸೋಲಿಡಾರಿಟಿ ಯೂತ್ ಮೂವ್‌ ಮೆಂಟ್ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸುಗಳು ಮತ್ತು ತಾಂತ್ರಿಕ ಸಲಹೆಗಳನ್ನು ಸಲ್ಲಿಸಲಿದೆ ಇದನ್ನು ತಕ್ಷಣ ವರಿಗಣಿಸಿಬೇಕು ಮತ್ತು ಅನುಷ್ಠಾನಗೊಳಿಸಬೇಕು
ಡಿಜಿಟಲ್ ತಂತ್ರಜ್ಞಾನಗಳು ಜನಜೀವನವನ್ನು ಸುಗಮಗೊಳಿಸಿದರೂ, ಅವುಗಳ ದುರುವಯೋಗದಿಂದ ನಮಾಜದಲ್ಲಿ ಅವಾಯ, ಆತಂಕ ಮತ್ತು ಆರ್ಥಿಕ ಅಸ್ಥಿರತೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಸೈಬರ್ ಅಪರಾಧಗಳ ವೇಗದ ಏರಿಕೆ ರಾಜ್ಯದ ಕಾನೂನು ಸುವ್ಯವಸ್ಥೆ, ಆಡಳಿತ ಯಂತ್ರ ಮತ್ತು ನಾರ್ವಜನಿಕ ಸುರಕ್ಷಿತೆಗೆ ದೊಡ್ಡ ಸವಾಲಾಗಿದೆ.
ಜನರ ಹಣ, ಜೀವನ ಮತ್ತು ಭವಿಷ್ಯವನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಾಗಿದ್ದು ಈಗಲೇ ಸೈಬ‌ರ್ ಅವರಾಧ ತಡೆಗೆ ಗಟ್ಟಿಯಾದ, ಪರಿಣಾಮಕಾರಿ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ.ಡಿಜಿಟಲ್ ತಂತ್ರಜ್ಞಾನಗಳು ಜನಜೀವನವನ್ನು ಸುಗಮಗೊಳಿಸಿದರೂ, ಅವುಗಳ ದುರುವಯೋಗದಿಂದ ಸಮಾಜದಲ್ಲಿ ಅಪಾಯ, ಆತಂಕ ಮತ್ತು ಆರ್ಥಿಕ ಅಸ್ಥಿರತೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಸೈಬರ್ ಅಪರಾಧಗಳ ವೇಗದ ಏರಿಕೆ ರಾಜ್ಯದ ಕಾನೂನು-ನುವ್ಯವಸ್ಥೆ, ಆಡಳಿತ ಯಂತ್ರ ಮತ್ತು ಸಾರ್ವಜನಿಕ ಸುರಕ್ಷಿತೆಗೆ ದೊಡ್ಡ ನವಾಲಾಗಿದೆ.
ಜನರ ಹಣ, ಜೀವನ ಮತ್ತು ಭವಿಷ್ಯವನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಾಗಿದ್ದು ಈಗಲೇ ನೈರ್ಬ ಅವರಾಧ ತಡೆಗೆ ಗಟ್ಟಿಯಾದ, ಪರಿಣಾಮಕಾರಿ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ. ಎಂದು ತಿಳಿಸಿದರು

Leave a Reply

Your email address will not be published. Required fields are marked *