ಪ್ರತಿ ವರ್ಷದಂತೆ ಸಿಂಧನೂರು ಮುಖ್ಯ ಹಳೇ ಬಜಾರದಲ್ಲಿರುವ ಶ್ರೀ ವರಸಿದ್ಧಿವಿನಾಯಕ, ಶ್ರೀ ಚಂದ್ರಮೌಳೇಶ್ವರ ಹಾಗೂ ದುಷ್ಟ ನಿಗ್ರಹ ಜಗತ್ ಕಲ್ಯಾಣಕಾರಕ ಮಂಗಲದಾಯಕನಾದ
ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವ ನಡೆಯಿತ್ತು. ಬೆಳಿಗ್ಗೆ ರುದ್ರಾಭಿಷೇಕ ಮತ್ತು ವೀರಗಾಸೆ ತಂಡದೊಂದಿಗೆ ಗಂಗಸ್ಥಳಗೆ ತೆರಳಿ ಸಿಂಧನೂರಿನ ಪ್ರಮುಖ ಬೀದಿಗಳ ಮೂಲಕ ಮೆರವಣೆಗೆ ಮದ್ಯಾಹ್ನ ದೇವಸ್ಥಾನವನ್ನು ತಲುಪಿತ್ತು. ಸಾಯಂಕಾಲ ನೂತನ ಮಹಾರಥೋತ್ಸವ ಸಕಲ ಭಕ್ತಾದಿಗಳ . ನಂದಿಕೋಲು, ವೀರಗಾಸೆ ಕುಣಿತ ಮತ್ತು ಡೊಳ್ಳುವಿನೊಂದಿಗೆ ನಗರದ ಹನುಮಾನ್ ದೇವಸ್ಥಾನದ ವರೆಗೂ ತಲುಪಿ ದೇವಸ್ಥಾನದ ಕಡೆಗೆ ರತೋಸ್ತವ ನಡೆಯಿತು . ಈ ಒಂದು ಕಾರ್ತಿಕೋಸ್ತವದಲ್ಲಿ ದೇವಸ್ಥಾನ ಸದ್ಯಸರು ಮತ್ತು ಭಕ್ತಾದಿಗಳು ಪಾಲ್ಗೊಂಡು ಯಶಸ್ವಿ ಗೊಳಿಸಿದರು


