ಸಿಂಧನೂರು ಸಮೀಪದ ಗೋನವಾರ,
ಗ್ರಾಮ ಪಂಚಾಯತ ನೂತನ ಕಟ್ಟಡ ಉದ್ಘಾಟನೆ ಹಾಗೂ ವಯೋನಿವೃತ್ತಿ ಹೊಂದಿದ ಶ್ರೀ ರಾಮಣ್ಣ ವಾಟರ್‌ಮ್ಯಾನ್ ಇವರ
ಬೀಳ್ಕೊಡುಗೆ ಸಮಾರಂಭ ವನ್ನು ದೀಪ ಬೆಳಗಿಸಿದರೆ ಮೂಲಕ ಶಾಸಕ ಹಂಪನಗೌಡ ಬಾದರ್ಲಿ ಅವರು ಉದ್ಘಾಟನೆಯನ್ನು ಮಾಡಿದರು… ನಂತರ ಮಾತನಾಡಿದ ಶ್ರೀ ಹಂಪನಗೌಡ ಬಾದರ್ಲಿ ಶಾಸಕರು
ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯ ಬಹಳ ಪ್ರಮುಖವಾದ ಕೆಲಸ ಜಿಲ್ಲಾ ಪಂಚಾಯತಿ ಸದಸ್ಯನಾಗಿ ನಾನು 5 ಬಾರಿ ಶಾಸಕನಾಗಿ ಆಯ್ಕೆ ಯಾಗಿದ್ದೀನಿ …ಯಾರು ಉತ್ತಮವಾಗಿ ಕೆಲಸಗಳನ್ನು ಮಾಡಿ ಕಾರ್ಯಗಳನ್ನು ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸುತ್ತಾರೋ ಅಂತವರಿಗೆ ಒಂದು ದೊಡ್ಡ ಸ್ಥಾನ ಸಿಕ್ಕೆ ಸಿಗುತ್ತದೆ… ನಮ್ಮ ದೇಶದಲ್ಲಿ ಶೇಕಡ 80% ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ ರೈತ ಕುಟುಂಬಗಳು 20% ಜನ ಮಾತ್ರ ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ… ಗ್ರಾಮೀಣ ಪ್ರದೇಶದಲ್ಲಿ ಶೇಕಡ 80 ವಾಸ ಮಾಡುತ್ತಿರುವ ಜನರಿಗೆ ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ವಿಕೆಂದ್ರಿಕರಣ ವ್ಯವಸ್ಥೆಯಲ್ಲಿ ಮೂಲಭೂತ ಸೌಕರ್ಯವನ್ನು ಕೊಡುವ ಅಧಿಕಾರ ಗ್ರಾಮ ಪಂಚಾಯಿತಿ ಗಳಿಗೆ ಕೊಟ್ಟಿದ್ದಾರೆ… ಗ್ರಾಮ ಪಂಚಾಯಿತಿ ಸದಸ್ಯರಾಗಲಿ ಅಧ್ಯಕ್ಷರಾಗಲಿ ಗ್ರಾಮ ಪಂಚಾಯಿತಿಗಳ ಬಗ್ಗೆ ಸರಿಯಾದ ಕಳಕಳಿಯನ್ನು ಇಟ್ಟುಕೊಂಡು ಸರಿಯಾದ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.. ಕೆಲವು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದೋರು ಮತ್ತು ಜಿಲ್ಲಾ ಪಂಚಾಯತಿ ಅಧ್ಯಕ್ಷರಾದವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಶಾಸಕರಿಗಿಂತಲೂ ಹೆಚ್ಚು ಕೆಲಸ ಮಾಡಿದ ಉದಾಹರಣೆಗಳಿವೆ.. ಗ್ರಾಮ ಪಂಚಾಯತಿ ಸದಸ್ಯರಾದವರು ಇದು ನಮ್ಮ ಕೆಲಸ ನಮ್ಮ ಮನೆಯ ಕೆಲಸ ಜನಸಾಮಾನ್ಯರಿಗೆ ನಾವು ಚುನಾಯಿತ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕಾದ ಚಿಂತನೆ ಮಾಡುವಂತಹ ವ್ಯವಸ್ಥೆ ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರಬೇಕಾದಂತಹ ಅವಶ್ಯಕತೆ ಬಾಹಳ ಇದೆ … ಇವತ್ತಿನ ದಿನಮಾನಗಳಲ್ಲಿ ಸ್ವಾಭಾವಿಕವಾಗಿ ಜನರ ಬೇಡಿಕೆಗಳು ಬಹಳವಾಗಿರುತ್ತವೆ… ಆದರೆ ರಾಜಕೀಯವಾಗಿ ಸರ್ಕಾರದಿಂದ ಬಂದಂತಹ ಅನುದಾನವನ್ನ ಸಂಪೂರ್ಣವಾಗಿ.. ಅನುದಾನವನ್ನ ಜನಸಾಮಾನ್ಯರಿಗೆ ತಿಳುವಳಿಕೆ ಮೂಡುವಂತಹ ಕೆಲಸವಾಗಬೇಕು.. ಎಲ್ಲಿಯವರೆಗೂ ಜನರಿಗೆ ಇದು ಪಂಚಾಯಿತಿ ವ್ಯಾಪ್ತಿಯಲ್ಲಿ .. ಇದು ಪಂಚಾಯಿತಿ ನಮ್ಮದು ನಾವು ಮಾಡುವಂತಹ ಕೆಲಸಗಳನ್ನು ಪ್ರಮಾಣಿಕವಾಗಿ ಮಾಡಬೇಕು ಆಮೇಲೆ ಆ ಗ್ರಾಮಗಳ ಬೇಡಿಕೆಗೆ ಅನುಸಾರವಾಗಿ ಕೆಲಸಗಳನ್ನು ಕೈಗೆತ್ತಿಕೊಂಡು ಮಾಡುವಂತ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲವೆಂದು ತಿಳಿಸಿದರು…
ನಂತರ ಈ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ವ್ಯಾಕರ್ ಮ್ಯಾನ್ ರಾಮಣ್ಣ ಅವರಿಗೆ ಸನ್ಮಾನಿಸಿ ಬಿಳ್ಕೊಡಲಾಯಿತು..ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಗಬುರ್ ಸಾಬ್ ಗೋನವಾರ್ ಅಬ್ಬಾಸಲ್ಲಿ ಮಠ , ಖಾಜಿ ಮಲಿಕ್ ವಕೀಲರು ಸಿಂಧನೂರು
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ
ಶ್ರೀಮತಿ ಮಂಜುಳಾ ಪಿ ಗಂ ಪಂಪಾಪತಿ ನಾಯಕ
,ಶ್ರೀಮತಿ ನರಸಮ್ಮ ಗಂ ಹನುಮಂತಪ್ಪ ಹೊಸಮನಿ, ಉಪಾಧ್ಯಕ್ಷರು, ಶ್ರೀಮತಿ ಶ್ರೀದೇವಿ ಗಂ ಮಲ್ಲಯ್ಯ ಮ್ಯಾಕಲ ಸದಸ್ಯರು, ಶ್ರೀ ನಾಗರೆಡ್ಡಿ ತಂ ಶರಣಪ್ಪ ಸದಸ್ಯರು, ಶ್ರೀ ನಾಗಯ್ಯ ತಂ ರಂಗಯ್ಯ ಬುಳ್ಳಿ, ಸದಸ್ಯರು, ಶ್ರೀಮತಿ ರಂಗಮ್ಮ ಗಂ ದೊಡ್ಡ ಹುಸೇನಪ್ಪ, ಸದಸ್ಯರು, ಶ್ರೀಮತಿ ದುರುಗಮ್ಮ ಗಂ ಸಣ್ಣ ದೇವೇಂದ್ರಪ್ಪ
ಸದಸ್ಯರು, ಶ್ರೀ ರಾಮನಗೌಡ ತಂ ನಾರಾಯಣಪ್ಪ ಸದಸ್ಯರು, ಶ್ರೀಮತಿ ಹನುಮವ್ವ ಗಂ ಅಯ್ಯನಗೌಡ ಪೊಲೀಸ್‌ ಪಾಟೀಲ್‌ ಸದಸ್ಯರು
, ಶ್ರೀಮತಿ ಮಹಾದೇವಿ ಗಂ ಸಣ್ಣ ಬಸವರಾಜ ಸದಸ್ಯರು
, ಶ್ರೀಮತಿ ಯಲ್ಲಮ್ಮ ಗಂ ಭೀಮರಾಯಪ್ಪ ಸದಸ್ಯರು, ಶ್ರೀಮತಿ ನಿಂಗಮ್ಮ ಗಂ ರಾಮ ಸದಸ್ಯರು, ಶ್ರೀ ಹನುಮಂತ ತಂ ನಿಂಗಯ್ಯ ಸದಸ್ಯರು, ಶ್ರೀ ಶಿವರಾಜ ತಂ ಈರಪ್ಪ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯ್ಯಣ್ಣ ಗದ್ದಿ
ಸರ್ವ ಸಿಬ್ಬಂದಿ ವರ್ಗ ಗ್ರಾಮ ಪಂಚಾಯತ್, ಗೋನವಾರ … ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *