ಮನೆಯ ಕುಟುಂಬದ ಅದರಲ್ಲೂ ಮನೆಯ ಮಹಿಳೆಯರ ಗೌರವಕ್ಕಾಗಿ ಶೌಚಾಲಯ ಬಳಕೆ ಪ್ರತಿಯೊಬ್ಬರ ಆಧ್ಯತೆಯಾದಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಮತ್ತು ‌ ವಾಂತಿ- ಭೇದಿಯಾಗುವುದನ್ನು ತಡೆಗಟ್ಟಲು ಸಾಧ್ಯವಿದೆ, ಅಲ್ಲದೆ ಆಹಾರ ಸುರಕ್ಷಿತವಾಗಿಟ್ಟುಕೊಳ್ಳುವ ಮೂಲಕ ಆದಷ್ಟು ಬಿಸಿಯಾದ ಆಹಾರ ಪದಾರ್ಥ ಸೇವಿಸುವ ಜೊತೆಗೆ ಕುಡಿಯುವ ನೀರನ್ನು ಸುರಕ್ಷಿತವಾಗಿರಿಸಿ ಕುದಿಸಿ ಆರಿಸಿ ಸೋಸಿ ಕುಡಿಯುವ ಮೂಲಕ ಆಕಸ್ಮಿಕವಾಗಿ ಉಂಟಾಗಬಹುದಾಗ ಸಂಭಾವ್ಯ ವಾಂತಿ-ಭೇದಿ ತಡೆಗಟ್ಟಬಹುದು ಎಂದು ತಾಲೂಕಾ ಅರೋಗ್ಯಾಧಿಕಾರಿ ಡಾ ಪ್ರಜ್ವಲ್‌ಕುಮಾರ ಸಾರ್ವಜನಿಕರಲ್ಲಿ ಆರೋಗ್ಯ ಶಿಕ್ಷಣದ ಮೂಲಕ ಮನವಿ ಮಾಡಿದರು.

ರಾಯಚೂರು ನಗರದ ಎಲ್‌ಬಿಎಸ್‌‌ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಆಶ್ರಯ ಕಾಲೂನಿ, ಎಲ್‌ಬಿಎಸ್‌ ನಗರ ಮುಂತಾದೆಡೆ, ಶೌಚಾಲಯಗಳ ಬಳಕೆಯ ಮಹತ್ವ, ಕುರಿತು ಜಾಗೃತಿ ಕಾರ್ಯದಲ್ಲಿ ಮಾತನಾಡುತ್ತಾ, ಬಯಲು ಶೌಚದಿಂದ ನೊಣಗಳು ಹೆಚ್ಚಾಗುವವು, ಮಕ್ಕಳಿಗೆ ಜಂತುಹುಳು ಕಂಡು ಬರುವುದರಿಂದ ರಕ್ತಹೀನತೆಯಿಂದಾಗಿ ಮಕ್ಕಳ ಕುಂಟಿತ ಬೆಳವಣಿಗೆ, ಮೇಲಿಂದ ಮೇಲೆ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಈ ದಿಶೆಯಲ್ಲಿ ಸಾರ್ವಜನಿಕರು ಮಹಾನಗರಪಾಲಿಕೆಯ ಸಲಹೆಗಳನ್ನು ಅನುಸರಿಸಿ ಶೌಚಾಲಯಗಳ ಬಳಕೆಗೆ ಆಧ್ಯತೆ ನೀಡಿ ಎಂದರು.

ವಾಂತಿ-ಭೇದಿ ತಡೆಗೆ ಸಹಕರಿಸಿ ನಗರದ ಬಡಾವಣೆಗಳಲ್ಲಿ ಪಾಲಿಕೆಯಿಂದ ಕುಡಿಯಲು ಸರಬುರಾಜು ಮಾಡುವ ನೀರು ಸಂಗ್ರಹಿಸಲು ಮನೆ ಮುಂದೆ ಇರುವ ನಳಗಳನ್ನು ತೆಗ್ಗಿನಲ್ಲಿ ಇರದಂತೆ ಜಾಗೃತಿವಹಿಸಿ, ಯಾಕೆಂದರೆ ತಗ್ಗಿನಲ್ಲಿ ಸಂಗ್ರಹಿಸಿದ ನೀರು ಪೈಪ್‌ನಲ್ಲಿ ಪುನಃ ಹೋಗುವ ಸಾಧ್ಯತೆ ಇರುತ್ತದೆ ಇದರಿಂದ ವಾಂತಿ-ಭೇದಿಯಾಗುವ ಸಾಧ್ಯತೆಯು ಹೆಚ್ಚು. ಈ ಹಿನ್ನೆಲೆ ಮಹಾನಗರ ಪಾಲಿಕೆ ಸರಬುರಾಜು ಮಾಡುವ ನೀರನ್ನು ನಳದ ಮೂಲಕ ಸಂಗ್ರಹಿಸುವ ಪೂರ್ವದಲ್ಲಿ ಎರಡು ಮೂರು ನಿಮಿಷ ಹರಿಯಲು ಬಿಡಿ, ಮನೆಯ ಮುಂದೆ, ಬಡಾವಣೆಗಳಲ್ಲಿ ನೀರಿನ ಪೈಪ್‌ ಸೊರಿಕೆಯಾಗುತ್ತಿದ್ದರೆ ತಕ್ಷಣವೇ ಅರೋಗ್ಯ ಇಲಾಖೆ ಅಥವಾ ಮಹಾನಗರಪಾಲಿಕೆಗೆ ತಿಳಿಸಿ ಎಂದು ವಿನಂತಿದರು.
ಅಲ್ಲದೆ ಮನೆಯ ಆವರಣದಲ್ಲಿ ನೀರು ಸಂಗ್ರಹ ಮಾಡಿಕೊಳ್ಳುವ ಸಂಪ್‌ಗಳಿಗೆ ಬಸಿ ನೀರು ಬರದಿರುವಂತೆ ಮುಂಜಾಗೃತೆ ವಹಿಸಿ ಹಾಗೂ ಊಟದ ಪೂರ್ವ, ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಟ 20 ಸೆಕೆಂಡ್ ತೊಳೆದುಕೊಳ್ಳಲು, ರಸ್ತೆ ಬದಿ ತೆರದಿಟ್ಟ ಆಹಾರ ಸೇವಿಸದಂತೆ, ಕುಡಿಯುವ ನೀರನ್ನು ಸರಿಯಾಗಿ ಮುಚ್ಚಳ ಮುಚ್ಚುವಂತೆ, ವಾಂತಿ ಭೇದಿ ಬಾಧೀತರಿಗೆ ಅರೋಗ್ಯ ಇಲಾಖೆಯ ಸಿಬ್ಬಂದಿಯವರು ಕೊಡುವ ಜೀವಜಲ ಓಆರ್‌‌ಎಸ್‌ ದ್ರಾವಣವನ್ನು ಶುದ್ದ ನೀರಿನಲ್ಲಿ ತಯಾರಿಸಿ ಇಪ್ಪತ್ನಾಲ್ಕು ಗಂಟೆಯೊಳಗೆ ಬಳಸಲು, ವಾಂತಿ ಭೇದಿ ಕಂಡು ಬಂದಲ್ಲಿ ಹತ್ತಿರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ರಿಮ್ಸ್‌ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭ್ಯವಿದ್ದು ದಯವಿಟ್ಟು ಪಡೆಯಲು ವಿನಂತಿಸಿದರು. ಈ ಸಂದರ್ಭದಲ್ಲಿ ಡಾ ಸುನೀತಾ, ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಸುರೇಶ, ಹೆಚ್‌ಐಓ ತಿಪ್ಪೇಸ್ವಾಮಿ, ಪಿಹೆಚ್‌ಸಿಓ ವಸಂತಕುಮಾರಿ, ಪವಿತ್ರಾ, ಅಶಾ ಕಾರ್ಯಕರ್ತೆಯರಾದ
ಈರಮ್ಮ, ಸುಮಿತ್ರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *