ದೇವದುರ್ಗ ತಾಲೂಕಿನ ಕೋತ್ತದೊಡ್ಡಿ ಗ್ರಾಮದಲ್ಲಿ ಚಿರತೆ ಕಾಣಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು …ಬೇರೆ ಕಡೆಯ ವಿಡಿಯೋದಲ್ಲಿನ ದೃಶ್ಯವಳಿ ದೇವದುರ್ಗ ತಾಲ್ಲೂಕಿಗೆ ಸಂಬಂಧಿಸಿದಲ್ಲ. ಬೇರೆ ಕಡೆಗಿನ ವಿಡಿಯೋ ತುಣುಕನ್ನು ಬಳಸಿಕೊಂಡು ದೇವದುರ್ಗ ತಾಲೂಕಿನ ಕೊತ್ತೊಡ್ಡಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾಗಿ ಸುಳ್ಳು ಪ್ರಚಾರ ಮಾಡಲಾಗಿರುತ್ತದೆ. ದಿನಾಂಕ 16-11-2025 ರಂದು ಕಾಚಾಪುರ ಗ್ರಾಮದಲ್ಲಿ ಹಸುವಿನ ಮೇಲೆ ದಾಳಿ ಮಾಡಿ ತಿಂದಿದ್ದು ಸದರಿ ಸ್ಥಳದಲ್ಲಿ ಬೋನ್ ಮತ್ತು ಕ್ಯಾಮರಾ ಅಳವಡಿಸಲಾಗಿರುತ್ತದೆ. ಮೂರು ದಿನಗಳಿಂದ ಚಿರತೆಯ ಚಲನ ವಲನದ ಬಗ್ಗೆ ಯಾವುದೇ ಮಾಹಿತಿ ದೊರೆತಿರುವದಿಲ್ಲ. ಸದರಿ ಸ್ಥಳದಿಂದ ಚಿರತೆ ಬೇರೆ ಸ್ಥಳಕ್ಕೆ ವಲಸೆ ಹೋಗಿರುವ ಸಾಧ್ಯತೆ ಇರುತ್ತದೆ ಎಂದು ಮೊಹಮ್ಮದ್ ಅಲಿಯುದ್ದೀನ್ ವಲಯ ಅರಣ್ಯ ಅಧಿಕಾರಿ ದೇವದುರ್ಗ ತಿಳಿಸಿದರು


